ಉಗ್ರರ ಹೊಡೆದುರುಳಿಸುವ ನಮ್ಮ ಉದ್ದೇಶ ಈಡೇರಿದೆ

ದೇಶ / ವಿದೇಶ

.http://kannada.vaarthe.com

ಭೂಸೇನೆ, ವಾಯುಸೇನೆ ಹಾಗೂ ನೌಕಾಸೇನೆಯ ಮುಖ್ಯಸ್ಥರ ಜಂಟಿ ಸುದ್ಧಿಗೋಷ್ಟಿಯ ಸಂಪೂರ್ಣ ಒಕ್ಕಣೆಯ ಪತ್ರಿಕಾ ಹೇಳಿಕೆ ಇಲ್ಲಿದೆ.

ಭಾರತೀಯ ವಾಯುಸೇನೆ, ಭೂಸೇನೆ ಹಾಗೂ ನೌಕಾಸೇನೆ ಗಡಿಗಳ ಸುರಕ್ಷತೆಗೆ ಅಗತ್ಯ ಕ್ರಮಕೈಗೊಂಡಿದ್ದು, ಎಲ್. ಓ. ಸಿ. ಮೇಲೆ ಹದ್ದಿನ ಕಣ್ಣಿಡಲಾಗಿದೆ. ಪಾಕಿಸ್ತಾಕ್ಕೆ ಈಗಾಗಲೇ ತಕ್ಕ ಪ್ರತ್ಯುತ್ತರ ನೀಡಲಾಗಿದ್ದು, ಮುಂದೆ ನಮ್ಮನ್ನು ಕೆಣಕಿದರೆ ಸಮರ್ಥವಾಗಿ ಎದುರುತ್ತರ ಕೊಡಲು ಸರ್ವಸನ್ನದ್ಧರಾಗಿದ್ದೇವೆ ಎಂದು ನಮ್ಮ ದೇಶವಾಸಿಗಳಿಗೆ ಭರವಸೆ ನೀಡುತ್ತಿದ್ದೇವೆ.

ಈ ಎಲ್ಲಾ ಸನ್ನಿವೇಶಗಳ ಹೊರತಾಗಿಯೂ ಶಾಂತಿ ಕಾಪಾಡಲು ನಾವು ಬದ್ಧರಾಗಿದ್ದೇವೆ ಆದರೆ ನಮ್ಮ ದೇಶವಾಸಿಗಳಿಗೆ ಹಾನಿಯಾದರೆ, ದೇಶಕ್ಕೆ ಹಾನಿಯಾದರೆ ತಕ್ಕ ಕಠಿಣ ಕ್ರಮ ವಹಿಸುತ್ತೇವೆ ಎಂಬುದು ಮೂರು ಸೇನೆಗಳ ಜಂಟಿ ಸುದ್ಧಿಗೋಷ್ಟಿಯ ಸಾರಾಂಶವಾಗಿದೆ.

Leave a Reply

Your email address will not be published. Required fields are marked *

3 × three =