ಇಂದಿನ ರಾಶಿ ಭವಿಷ್ಯ : 3/3/2019 : ಭಾನುವಾರ

ಜ್ಯೋತಿಷ್ಯ - ಭವಿಷ್ಯ ಧಾರ್ಮಿಕ

kannada.vaarthe.in

೨೭, ಮಾಘ, ಕೃಷ್ಣ ದ್ವಾದಶಿ ೧೯೪೦ ಶಕ ಸಂವಾತ. ಸೂರ್ಯೋದಯ ೬:೩೮ ಸೂರ್ಯಾಸ್ತ : ೬:೨೫ ; ಚಂದ್ರೋದಯ ೪:೫೯ ಚಂದ್ರಾಸ್ತ : ೩:೫೮ ; ರಾಹುಕಾಲ : ೪:೫೭ ರಿಂದ ೬:೨೫ ; ಗುಳಿಕ ಕಾಲ ೩:೨೮ ರಿಂದ ೪:೫೭ ; ಯಮಗಂಡ ಕಾಲ ೧೨:೩೨ ರಿಂದ ೨:೦೦ ಗಂಟೆಯವರೆಗೆ ; ವಿಜಯ ಮುಹೂರ್ತ ೨:೩೦ ರಿಂದ ೩:೧೭

ಮೇಷ

ಇಂದಿನಿಂದ ನಿಮ್ಮ ಶುಭಸಮಯ ಆರಂಭ. ಹೊಸ ಕೆಲಸಗಳ ಆರಂಭಿಸಲು ಸೂಕ್ತ ಸಮಯ. ಆದರೆ ಹಣಕಾಸಿನ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾರಿಗೂ ಸಾಲ ಕೊಡಲು ಹೋಗಬೇಡಿ. ನೆಮ್ಮದಿಗಾಗಿ ಇಷ್ಟದೇವರ ಸನ್ನಿಧಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ.

ವೃಷಭ

ಯಾವುದೇ ಹೆಜ್ಜೆಯಿಡಬೇಕಾದರೂ ಏಕಾಂಗಿ ನಿರ್ಧಾರ ಕೈಗೊಂಡರೆ ಕೈ ಸುಟ್ಟುಕೊಳ್ಳಬೇಕಾದ ಪರಿಸ್ಥಿತಿ ಬಂದೀತು. ಹೆಜ್ಜೆಯನ್ನು ಒಗ್ಗೂಡಿ ದೃಢವಾಗಿಡಿ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ.

ಮಿಥುನ

ಬೇರೆ ಬೇರೆ ಮೂಲಗಳಿಂದ ಧನಾಗಮನವಾಗಿ ಸಂತಸ ಕಾಣುವಿರಿ. ಬರಬೇಕಿದ್ದ ಬಾಕಿ ಹಣ ಸಂದಾಯವಾಗುವುದು. ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ ಮಾಡಬೇಕಾಗಿ ಬರಬಹುದು. ಸಂಗಾತಿಯೊಂದಿಗೆ ಉಪಯುಕ್ತ ಸಮಯ ಕಳೆಯುವಿರಿ.

ಕರ್ಕಾಟಕ

ಕುಟುಂಬದವರೊಂದಿಗೆ ಪ್ರವಾಸ ಹೋಗುವಿರಿ. ಪ್ರಯಾಣದಲ್ಲಿ ಎಚ್ಚರ. ಆದಷ್ಟೂ ವಾಹನ ಚಾಲನೆ ಮಾಡದೇ ಇದ್ದರೆ ಒಳ್ಳೆಯದು. ಆರ್ಥಿಕ ಲಾಭವಾಗಿ ನೆಮ್ಮದಿ ಕಾಣುವಿರಿ.

ಸಿಂಹ

ಪ್ರೇಮಿಗಳಿಗೆ ಶುಭ ದಿನ. ದಂಪತಿಗಳು ಸರಸದ ಸಮಯ ಕಳೆಯುವರು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು. ಹೊಸ ಮನೆ ಖರೀದಿ ಬಗ್ಗೆ ಯೋಚನೆ ಮಾಡುವಿರಿ. ಹಣಕಾಸಿನ ವ್ಯವಹಾರದ ಬಗ್ಗೆ ಎಚ್ಚರವಿರಲಿ.

ಕನ್ಯಾ

ಕುಲದೇವರಿಗೆ ಪ್ರಾರ್ಥನೆ ಮಾಡಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಖರ್ಚು ವೆಚ್ಚಗಳು ಅಧಿಕವಾದೀತು. ಆದರೆ ಕುಟುಂಬದವರೊಂದಿಗೆ ನೆಮ್ಮದಿಯ ವಾತಾವರಣ ಅನುಭವಿಸುವಿರಿ. ಒಳ್ಳೆಯ ದಿನ.

ತುಲಾ

ಹೊಸ ವಾಹನ ಖರೀದಿಗೆ ಮುಂದಾಗುವಿರಿ. ಆದರೆ ಖರ್ಚುಗಳ ಬಗ್ಗೆ ಹಿಡಿತವಿರಲಿ. ವಿದ್ಯಾರ್ಥಿಗಳಿಗೆ ಇಂದು ಅತೀವ ಪ್ರಯತ್ನ ನಡೆಸಬೇಕಾದೀತು. ಹೊಸ ಜನರೊಂದಿಗೆ ವಿಶ್ವಾಸ ಬೆಳೆಸುವ ಮೊದಲು ಯೋಚಿಸಿ ಹೆಜ್ಜೆಯಿಡಿ.

ವೃಶ್ಚಿಕ

ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚಾಗಿ ಗೌರವ ಸಂಪಾದಿಸುವಿರಿ. ಆರ್ಥಿಕ ಲಾಭವಾಗಲಿದೆ. ಧರ್ಮ ಕಾರ್ಯಗಳಿಗಾಗಿ ಧನ ವಿನಿಯೋಗ ಮಾಡಿಕೊಳ್ಳಬೇಕಾದೀತು. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.

ಧನು

ಯಾವುದೇ ಕೆಲಸ ಮಾಡುವುದಿದ್ದರೂ ಕುಟುಂಬದ ಹಿರಿಯರೊಡನೆ ಸಮಾಲೋಚನೆ ನಡೆಸಿ. ದಾಯಾದಿಗಳಿಂದ ತೊಂದರೆ ಉಂಟಾಗುವ ಸಂಭವವಿದೆ. ಆರ್ಥಿಕ ಲಾಭಗಳಿದ್ದರೂ ಅಷ್ಟೇ ಖರ್ಚು ವೆಚ್ಚಗಳಿರಲಿವೆ.

ಮಕರ

ಮಿತ್ರರ ಅನಾರೋಗ್ಯ ಸುದ್ದಿ ಕೇಳಿಬಂದೀತು. ಇನ್ನೊಬ್ಬರಿಗೆ ಸಹಾಯ ಮಾಡುವ ಮೊದಲು ಯೋಚಿಸಿ ಹೆಜ್ಜೆಯಿಡಿ. ಕುಟುಂಬದವರೊಂದಿಗೆ ಕಿರಿ ಕಿರಿ ಮಾಡಿಕೊಳ್ಳುವ ಸಾಧ್ಯತೆಯಿದೆ. ಭೂಮಿ ಖರೀದಿ ಮಾಡುವ ಯೋಗವಿದೆ.

ಕುಂಭ

ಭೋಜನ ಪ್ರಿಯರಾಗಿದ್ದರೆ ಇಂದು ಉತ್ತಮ ಭೋಜನ ಸವಿಯುವಿರಿ. ಬಂಧು ಮಿತ್ರರ ಆಗಮನದಿಂದ ಸಂತೋಷ ಕಾಣುವಿರಿ. ಖರ್ಚು ವೆಚ್ಚಗಳೂ ಅಧಿಕವಾಗಲಿದೆ.

ಮೀನ

ಶುಭ ಸಮಾರಂಭಗಳಲ್ಲಿ ಭಾಗವಹಿಸುವಿರಿ. ಹೊಸ ವಿಚಾರಗಳನ್ನು ತಿಳಿದುಕೊಳ್ಳುವಿರಿ. ಹೊಸ ಜನರೊಂದಿಗಿನ ಓಡಾಟ ಇಂದು ನಿಮ್ಮನ್ನು ಉಲ್ಲಾಸದಾಯಕವಾಗಿಡುತ್ತದೆ.

Leave a Reply

Your email address will not be published. Required fields are marked *

19 − 15 =