ರೈತರ ಬದ್ಧವೈರಿಯಂತಿದೆ ಹೆಚ್.ಡಿ.ಕೆ ಸರ್ಕಾರದ ಕಾರ್ಯವೈಖರಿ : ಮೋದಿ ವಾಗ್ಝರಿ!

ಚುನಾವಣೆ ದೇಶ / ವಿದೇಶ ರಾಜಕೀಯ

https://kannada.vaarthe.com

ಅಧಿಕಾರ ದಾಹಿ ಕಾಂಗ್ರೆಸ್​, ರಿಮೋಟ್​ ಕಂಟ್ರೋಲ್​ ಸಿಎಂ ನಿಮ್ಮನ್ನ ಆಳುತ್ತಿದ್ದಾರೆ.
ರಾಜ್ಯದ ರೈತರ ಖಾತೆಗೆ ಎರಡು ಸಾವಿರ ತಲುಪಿದ್ರೆ ಮೋದಿ ಮೋದಿ ಅಂತಾರೆ ಎಂಬ ಭಯವಿದೆ. ಕೇಂದ್ರ ಸರ್ಕಾರ ರೈತರಿಗೆ ನೀಡುತ್ತಿರುವ ಹಣದಿಂದ ಸರ್ಕಾರಕ್ಕೆ ಹೊಟ್ಟೆಕಿಚ್ಚಾಗುತ್ತಿದೆ. ಕೇಂದ್ರ ಸರ್ಕಾರದಿಂದ ರೈತರ ಖಾತೆಗೆ ಹಣತಲುಪುವ ಮಧ್ಯದಲ್ಲಿ ದೊಡ್ಡ ಮೊತ್ತ ಇರಲಿ, ಎರಡು, ಐದು, ರೂಪಾಯಿಗಳನ್ನೂ ಎಗರಿಸಲು ಆಗುತ್ತಿಲ್ಲ. ರೈತ ವಿರೋಧಿಗಳು ನಿಮ್ಮ ಸರ್ಕಾರದ ರೂಪದಲ್ಲಿದ್ದಾರೆ. ರೈತರ ಬದ್ಧ ವೈರಿಯಂತೆ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರ ಅಧಿಕಾರ ನಡೆಸುತ್ತಿದೆ – ಹೀಗೆ ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಭಾರೀ ಮೊನಚಿನ ವಾಗ್ದಾಳಿ ನಡೆಸಿದ್ದು ಪ್ರಧಾನಿ ನರೇಂದ್ರ ಮೋದಿ.

ಕಲಬುರಗಿಯಲ್ಲಿಂದು ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕರ್ನಾಟಕದ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ರಿಮೋಟ್​ ಕಂಟ್ರೋಲ್‌ ಮುಖ್ಯಮಂತ್ರಿ, ಕರ್ನಾಟಕ ಜನರ ಬೆನ್ನಿಗೆ ಚೂರಿ ಹಾಕಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಗುಡುಗಿದ್ರು. ಕಲಬುರಗಿ ನಗರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರ ಖಾತೆಗೆ ಪ್ರತಿ ವರ್ಷ ₹ 75 ಸಾವಿರ ಕೋಟಿ ವರ್ಗಾವಣೆ ಮಾಡಲಿದೆ. ಈಗಾಗಲೇ ಕೋಟ್ಯಂತರ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಲಾಭ ತಲುಪಿದೆ. ಕರ್ನಾಟಕದ 71 ಲಕ್ಷ ರೈತರಿಗೂ ಇದರ ಲಾಭ ಸಿಗಲಿದೆ. ಕೇವಲ ರಾಜಕೀಯ ಮಾಡುವ ಕೆಲ ಸರ್ಕಾರಗಳು ಇವೆ. ಅವರ ರಾಜ್ಯದ ರೈತರ ಖಾತೆಗೆ ಎರಡು ಸಾವಿರ ತಲುಪಿದ್ರೆ ಮೋದಿ ಮೋದಿ ಅಂತಾ ಅಂತಾರೆ ಎಂಬ ಭಯವಿದೆ. ಕೇಂದ್ರ ಸರ್ಕಾರ ರೈತರಿಗೆ ನೀಡುತ್ತಿರುವ ಹಣದಿಂದ ಸರ್ಕಾರಕ್ಕೆ ಹೊಟ್ಟೆಕಿಚ್ಚಾಗುತ್ತಿದೆ. ಮಧ್ಯದಲ್ಲಿ ದೊಡ್ಡ ಮೊತ್ತ ಇರಲಿ ಎರಡು, ಐದು, ರೂಪಾಯಿಗಳನ್ನೂ ಎಗರಿಸಲು ಆಗುತ್ತಿಲ್ಲ. ರೈತ ವಿರೋಧಿಗಳು ನಿಮ್ಮ ಸರ್ಕಾರದ ರೂಪದಲ್ಲಿದ್ದಾರೆ ಅಂತ ಹರಿಹಾಯ್ದರು.

ಇದೇ ವೇಳೆ ಸಿಎಂ ಕುಮಾರಸ್ವಾಮಿಯವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ,​ ರಿಮೋಟ್‌ ಕಂಟ್ರೋಲ್‌ ನ ಹಿಡಿತಕ್ಕೊಳಗಾಗಿ ಆಡಳಿತ ನಡೆಸುತ್ತಿರುವ ಇಂತಹ ಮುಖ್ಯಮಂತ್ರಿಯಿಂದ ಅಭಿವೃದ್ಧಿ ಸಾಧ್ಯವಿಲ್ಲ, ಕರ್ನಾಟಕ ಸರ್ಕಾರ ರೈತರಿಗೆ ವಂಚನೆ ಮಾಡುತ್ತಿದೆ, ರೈತಪರ ಯೋಜನೆಗಳಿಗೆ ಸರ್ಕಾರ ಅಡ್ಡಗೋಡೆಯಾಗಿದೆ, ಅಧಿಕಾರ ದಾಹಿ ಕಾಂಗ್ರೆಸ್​, ರಿಮೋಟ್​ ಕಂಟ್ರೋಲ್​ ಸಿಎಂ ನಿಮ್ಮನ್ನ ಆಳುತ್ತಿದ್ದಾರೆ. ರೈತರ ಬದ್ಧ ವೈರಿಯಂತೆ ಸರ್ಕಾರ ಅಧಿಕಾರ ನಡೆಸುತ್ತಿದೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಎನ್‌ಡಿಎ ಸರ್ಕಾರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದಡಿ ನಡೆಯುತ್ತಿದೆ.
ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ನಾವು ಸಕಲ ಕ್ರಮ ಕೈಗೊಂಡಿದ್ದೇವೆ. ಹಿಂದುಸ್ಥಾನದ 130 ಜನ ಕೋಟಿ ಜನ ನನಗೆ ಶಕ್ತಿ ನೀಡಿದ್ದಾರೆ. ಜನರೇ ನಿಮ್ಮ ರಾಜ್ಯ ಸರ್ಕಾರವನ್ನ ಒಮ್ಮೆ‌ ನೋಡಿ ಒಬ್ಬ ಅತ್ತ ಎಳೆದರೆ ಇನ್ನೂಬ್ಬ ಇನ್ನೊಂದು ಕಡೆ ಎಳೆಯುತ್ತಾನೆ. ಇದರಿಂದ ಅಭಿವೃದ್ಧಿ ಸಾಧ್ಯವಿಲ್ಲ. ದೇಶದಿಂದ ಭ್ರಷ್ಟಾಚಾರ ಕಿತ್ತೊಗೆಯಬೇಕು, ನೀವು ನನ್ನ ಜೊತೆ ಇರುವುದರಿಂದ ನಾನು ಭಯು ಪಡುವುದಿಲ್ಲ. ನಾನು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಿದ್ದೇನೆ ಅದಕ್ಕೆ ಎಲ್ಲರೂ ಒಂದಾಗಿ ಸೇರಿ ನನ್ನನ್ನ ಕೆಳಗಿಳಿಸಲು ತಂತ್ರ ರೂಪಿಸುತ್ತಿದ್ದಾರೆ ಎಂದು ಮಹಾಘಟಬಂಧನವನ್ನು ಟೀಕಿಸಿದ್ರು.

ಭಾರೀ ಜನಸ್ತೋಮವನ್ನುದ್ದೇಶಿ ಪ್ರಧಾನಿ ಮಾಡಿದ ಭಾಷಣಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯ್ತು, ಉರಿಯುವ ಬಿಸಿಲಿನ ಮಧ್ಯೆಯೂ ಜನ ಅತ್ತಿತ್ತ ಕದಲದೇ ಪ್ರಧಾನಿ ಭಾಷಣವನ್ನು ಸಂಪೂರ್ಣವಾಗಿ ಆಲಿಸಿದ್ರು. ಇದೇ ವೇಳೆ ಇತ್ತೀಚಿಗಷ್ಟೇ ಕಾಂಗ್ರೆಸ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಡಾ. ಉಮೇಶ್‌ ಜಾಧವ್‌ ಪ್ರಧಾನಿ ಮೋದಿ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾದ್ರು.

Leave a Reply

Your email address will not be published. Required fields are marked *

4 × three =